ಭಕ್ತಿ ತುಳುಕಾಡಿ
ಭಗವದ್ಗೀತೆಯ ನ್ಯೂ
ಎಡಿಷನ್-ಹಾರ್ಡ್ ಬೌಂಡ್ ಕಾಪಿಯನ್ನು
ಗೋಮೂತ್ರದಲ್ಲಿ ಅದ್ದಿದೊಡನೇ
ಭಕ್ತಿಸ್ಖಲನ; ಕಾಮ,
ಫುಲ್‌ಸ್ಟಾಪು,
ಕೋಲನ್ನು, ಸೆಮಿ-ಕೋಲನ್ನು,
ಅಪಾಸ್ಟಫಿ ಎಲ್ಲವೂ ಗಂಜಲಮಯ
ಸುತ್ತಲೂ ಪವಿತ್ರಾತ್ಮಗಳ
ಎತ್ತುಚ್ಚೆಯ ಘಾಟೋ ಘಾಟು


ಧರ್ಮಾಂಧರು ಎಷ್ಟು ಗೋಮುಖವ್ಯಾಘ್ರರು ಅಂದರೆ ಸಿಹಿಮಾತಿನಲ್ಲಿ ವಿಷಬೀಜವನ್ನು ಬಿತ್ತುವರು. ಮಂದಿಯನ್ನು ಭ್ರಾಂತಿಗೆ ತಳ್ಳುವ ಅಸಹಜಕ್ರಿಯೆಗಳು ಕತೆಗಳನ್ನು ಕಟ್ಟುವರು. ಹಾಗೇ ಗೌರವ, ಸಭ್ಯತೆ ಎಂದು ತಮ್ಮಗೆ ಮತ್ತೆ ಹಲವು ಸಾಮಾಜಿಕ ಭ್ರಾಂತಿಗಳಿಂದ ರಕ್ಷಣೆ ಒದಗಿಸಿಕೊಳ್ಳುವರು. ಅಷ್ಟೇ ಯಾಕೆ ಸಣ್ಣ ಸಣ್ಣ ಮಕ್ಕಳನ್ನು ಆಶ್ರಮ, ಶಾಲೆ ಎಂದು ಅಲ್ಲಿ ಅವರ ಕುತೂಹಲವನ್ನು , ಪ್ರಶ್ನಾಮನವನ್ನು ಕೊಂದು ಒಬ್ಬ ಬೆನ್ನಾಳನ್ನಾಗಿಕೊಳ್ಳುವರು. ತಕ್ಕಷ್ಟು ಬಲ ಬಂದ ಮೇಲೆ ರಾಜ್ಯಾಢಳಿತ ಮತ್ತು ಅನ್ಯಧರ್ಮೀಯರ ಮೇಲಣ ಹಿಂಸೆ, ದಬ್ಬಾಳಿಕೆಗೈಯ್ಯುವರು.

ತನಗೆ ಕಿರಿಕಿರಿ ಎಂಬುದನ್ನು ಅಸಭ್ಯತೆ, ಅಧರ್ಮ ಎಂದು ಬಿಡುವುದು. ಹಾಗಾದರೆ ಇವರಿಂದ ಕಿರಿಕಿರಿಯಾಗುತ್ತದಲ್ಲ ಬೇರೆಯವರಿಗೆ?

ಯಾವುದೇ ಧರ್ಮವೂ ಚರ್ಚೆಗೆ ಅನುವೇ ನೀಡುವುದಿಲ್ಲ. ಯಾಕೆಂದರೆ “ದೇವರೆಂಬುದಕ್ಕೆ ಪುರಾವೆ ಇದೆಯೇ?” ಎಂಬ ಮೂಲಭೂತ ಪ್ರಶ್ನೆಗೆ ಧರ್ಮ/ಧರ್ಮಿಷ್ಠರು/ಧರ್ಮಾಂಧರು ಎಂದು ವೈಜ್ನಾನಿಕವಾದ, ತರ್ಕಬದ್ಧವಾದ, ವಿವೇಕಪೂರ್ಣ ಉತ್ತರಕೊಡಲಾರರು, ಬದಲಿಗೆ ಸಿಗುವುದು ಭ್ರಾಂತಿಯ ಕತೆಗಳು, ಅಂತೆಕಂತೆಗಳು, ಕಾಮಿಕ್ ಪುಸ್ತಕದಂತೆ ರೋಜಕ ಪವಾಡಗಳು, ಇಲ್ಲವೇ circular logicನ ವಾದಗಳು.

ಜಗತ್ತಿಗೆ ಸೃಷ್ಟಿಕರ್ತನೊಬ್ಬನಿದ್ದರೆ, ಆ ಸೃಷ್ಟಿಕರ್ತನಿಗೊಬ್ಬ ಸೃಷ್ಟಿಕರ್ತನಿರಬೇಕಲ್ಲ. ಆ ಸೃಷ್ಟಿಕರ್ತನ ಸೃಷ್ಟಿಕರ್ತನಿಗೊಬ್ಬ ಸೃಷ್ಟಿಕರ್ತ. ಒಂದು ವೇಳೆ ಸೃಷ್ಟಿಕರ್ತನು ತನ್ನ ಸೃಷ್ಟಿಕರ್ತನಿಲ್ಲದೇ ಮೂಡಿಬರಬಹುದಾದರೇ, ಜಗತ್ತೂ ಕೂಡ ಸೃಷ್ಟಿಕರ್ತನಿಲ್ಲದೇ ಮೂಡಿಬಂದಿರಬಹುದು. ವಿಜ್ನಾನದ ಪುರಾವೆಗಳೆಲ್ಲ ಸ್ವಂಭೂ ವಿಶ್ವವನ್ನೇ ತೋರಿಸುತ್ತಿದೆಯಲ್ಲ.


ಈ ವಿಡಿಯೋದಲ್ಲೊಬ್ಬ ಅಮೆರಿಕದಲ್ಲಿ ಒಂದು ನಾಸ್ತಿಕರನ್ನು ಗೇಲಿ ಮಾಡುವ ಬಂಪರ್‍ ಸ್ಟಿಕ್ಕರ್‍ ಬಗ್ಗೆ ಕೋರ್ಟಿಗೆ ಹೋಗಲು ಮಾತಾಡುತ್ತಾನೆ. ಅವನ ಯೋಚನೆ ಅಭಿಪ್ರಾಯ ಸ್ವಾತಂತ್ರ್‍ಯಕ್ಕೆ ವಿರೋಧ ಎಂದು ಮಿಕ್ಕ ನಾಸ್ತಿಕರು ಹೇಗೆ ಅವನ್ನು ಹಳಿಯುತ್ತಾರೆ ನೋಡಿ….

ನನಗೂ ಇವನ ಕೋರ್ಟಿಗೆ ಹೋಗುವ ಯೋಚನೆಗೆ ವಿರೋಧವಿದೆ. ಅಭಿಪ್ರಾಯ ಸ್ವಾತಂತ್ರ್‍ಯ ಎಲ್ಲಿರಿಗೂ ಇದೆ. ಯಾವುದೇ ಒಂದು ಅಭಿಪ್ರಾಯವನ್ನು ಅಳಿಸಿ ಹಾಕುವುದು, ತಡೆಯುವುದು ಸ್ವಾತಂತ್ರ್‍ಯಕ್ಕೆ ವಿರೋಧ. ಅದನ್ನು ಒಪ್ಪುವುದು ಬಿಡುವುದು ಬೇರೆಯ ವಿಷಯ.

ಇದೊಂದು ಒಳ್ಳೇ ಚರ್ಚೆ. ನಿರೂಪಕರ ಅಭಿಪ್ರಾಯಗಳು ತುಂಬಾ ಚನ್ನಾಗಿವೆ.


http://thesituationist.wordpress.com

http://thesituationist.wordpress.com

ಮನದ ಕುತುಕಕ್ಕೆ ವಿಜ್ನಾನದ ನೆರವು, ಮನವನ್ನು ಇನ್ನೂ ಚುರುಕಾಗಿಸಿ ಇನ್ನೂ ಕುತುಕವನ್ನು ಹೆಚ್ಚಿಸಿ, ಅದೇನು ಇದೇನು, ಹೆಂಗೆಂತು ಎಂದು ನಮ್ಮನ್ನು ಹೆಚ್ಚೆಚ್ಚು ಊಂಕಲು ಅಣಿಯಾಗಿಸಿ, ಒಂದೊಂದು ಸಂಗತಿಯ, ಸರಕಿನ ನಿಬ್ಬರ, ನುಣುಪು, ಹಿಂದು, ಮುಂದು, ನೆಗಳು, ಮಾರ್ಪಾಟುಗಳನ್ನು ಅರಿಯಲು ತವಕಿಸಿಸುತ್ತದೆ. ಆ ಬಗೆಯ ಮನ, ನೋಟ, ಕಾಣ್ಪು, ಈ ಉಲಗು ನಮಗರಿಯಂತೆ ಯಾವುದೋ ಒಂದು ತಿಳಿಯಲಾರದ ಆರ್ಪು ಮಾಡಿಬಿಟ್ಟಿದೆ, ನಮಗೆ ಅದರ ಒಳಹುಗಳನ್ನು, ಗೋಜಲನ್ನು, ನೆಗಳನ್ನು, ಮಾರ್ಪಡಿಕೆಗಳನ್ನು ಅರಿಯಲಾರದು, ಅದಕ್ಕೆ ನಮೋ ನಮೋ ಎಂದು ಮಣಿಯುದೊಂದೇ ದಾರಿ ಎಂದು ಕುತುಕವನ್ನು ಕೊಂದುಬಿಟ್ಟ ಮನಕ್ಕೆ ತಕ್ಕವಾಗಿ ಆರುವುದೇ ಇಲ್ಲ.

ಕಾರಂತ, ಡಾವಿಂಸಿ ಮುಂತಾದ ಮಂದಿಗಳು ಕುತುಕಗಳು ಎಶ್ಟು ಪಸಿಯಿಸುವಂತದ್ದು. ಯಾರೋ ಬಲು ಹಿಂದೆ ಹೇಳಿದ ಕಟ್ಟುಗತೆಗಳನ್ನು ದಿಟವೆಂದು ಅಂದುಕೊಂಡು, ನಮ್ಮ ಮುಂದಿರುವ ಕುತುಕದ ಉಲುಗನ್ನು ಬರೀ ಒಂದು ಅರಿಯಲಾರದ ಕಗ್ಗಂಟಶ್ಟೆ ಎಂದು ನಮ್ಮ ಜಾಣ್ಮೆಗೆ ಅಡ್ಡಕಟ್ಟಿಕೊಳ್ಳುವುದು ತರವೇ!?


“][strategic-innovation]

[strategic-innovation

ಆಸ್ತಿಕರಾಗಲು ಅಂಜಿಕೆಪಡುವುದೊಂದಿದ್ದರೆ ಸಾಕು. ಆ ಅಂಜಿಕೆ ಹೋಗಲೆಂದು ದೇವರನ್ನು ನೆನೆಯುವುದು. ಯಾವ ತರ್ಕಗಳನ್ನೂ ಮಾಡದೆ, ಒಬ್ಬ ನಿಶ್ಟಾವಂತ ಬೆನ್ನಾಳಾಗಿ ಒಬ್ಬ ’ಗುರು’ವಿನ ಕಾಲು ಹಿಡಿದು, ಅವನು ಹೇಳೋದನ್ನೆಲ್ಲ ಪ್ರಶ್ನಿಸದೇ ಮಾಡಿಕೊಂಡು ಹೋದರಾಯಿತು. ಇಲ್ಲಿ ’ಗುರು’ ಒಂದು ಹೊತ್ತಗೆಯೂ ಆಗಿರಬಹುದು.. ಯಾವ ಜ್ಞಾನ, ಚರ್ಚೆ, ಪ್ರಶ್ನೆಗಳು ಬೇಕಾಗೇ ಇಲ್ಲ. ಎಂತಹ ಭ್ರಾಂತಿ ನೆಮ್ಮದಿಯ ಬಾಳು. ಅಬ್ಬ.!

ಇನ್ನು ನಾಸ್ತಿಕತೆ, ಸಮಾಜ ಹೋಗೋ ದಾರಿಗಿಂತ ಬೇರೆ ಕಡೆಗೆ ಹರಿಯುವ ಯೋಚನೆಗೆ ಅದಟುತನ ಬೇಕು. ಬಂಡೇಳಿಕೆ ಬೇಕು. ವಾದಕ್ಕೆ ನಿಂತು ನಿಭಾಯಿಸಲು ತಕ್ಕುಮೆ ಬೇಕು. ಅವಮಾನ ಹಿಂಸೆಗಳು ತಾಳಿಕೊಳ್ಳಲು ತಾಳ್ಮೆ ಬೇಕು. ಪ್ರಶ್ನೆಗಳನ್ನು ಹುಟ್ಟಿಸುವ ಹಾಗೂ ಉತ್ತರಗಳನ್ನು ವಿವೇಜಿಸುವ ಜಾಣ್ಮೆ ಬೇಕು..
ಅಬ್ಬಬ್ಬ ಏನು ರೋಚಕ ಬದುಕು. ಯಾವಾಗಲೂ ತಲೆ ಏನಾದರೂ ಪ್ರಶ್ನಿಸುತ್ತಲೇ ಇರುತ್ತೆ, ಉತ್ತರಗಳನ್ನು ಅನುಮಾನಿಸುತ್ತಲೇ ಇರತ್ತೆ.. ಬದಲಿ ಉತ್ತರಗಳನ್ನು ಹುಡುಕುತ್ತಲೇ ಇರತ್ತೆ.. ಆ ಉತ್ತರಕ್ಕೂ ಪ್ರಶ್ನೆ.. ಮುಂದೇನು? ಓ ಹಿಂದಿನ ಒಂದು ಅರಿಕೆ, ಬರೀ ಊಹೆ ಆಗಿತ್ತೆ? ಕಾರಣಗಳು? ಅದು ಯಾಕೆ ಹೇಗೆ?

ಇನ್ನು (ಅಪಕ್ವತೆ)ಅನಾಸ್ತಿಕತೆ.. ಇದು ಅರೆ ನಾಸ್ತಿಕರ ಅರೆ ಆಸ್ತಿಕರ ಪಾಡು. ಇದೊಂದು ತಾಕಲಾಟ. ಒಂದು ಕಡೆ ಪ್ರಶ್ನೆಗಳು ಬಂದರೂ, ಇನ್ನೊಂದು ಕಡೆ ಆ ಪ್ರಶ್ನೆಗಳಿಗೆ ಉತ್ತರಗಳು ಅರಗಿಸಿಕೊಳ್ಳಲಾರದೇ ಇರುವ ಪಾಡು. ಈ ಪಾಡಿನ ಮಂದಿ ಯಾವಾಗಲೂ ಇದೇ ಪಾಡಿನಲ್ಲೇ ಇರುವ ಸ್ಥಿತಿಯಾಗಿ ಬಿಡುತ್ತದೆ. ಅವರು ಅತ್ತ ಆಸ್ತಿಕತೆ ಎಂಬ ಮರುಳಿನಿಂದಾಚೆ ಹೋಗಲಾರರು, ಇತ್ತ ನಾಸ್ತಿಕತೆ ಎಂಬ ಕುತಕವನ್ನು ಸಹಿಸಲಾರರು. ಇಂತಹ ಮಂದಿಯ ಬರಹಗಳು, ಕೃತಿಗಳು ತುಂಬಾ ಜಾಣ್ಮೆಯಿಂದ ಕೂಡಿದ್ದರೂ ಸೂಕ್ತ ಊಂಕನ್ನು ಅವರಿಗೇ ಅರಿವಿಲ್ಲದೇ ಬಿಟ್ಟುಬಿಟ್ಟಿರುತ್ತಾರೆ. ಇವರಿಗೆ ಹಲವು ಸಲ ತನಗೇನು ಗೊತ್ತಿಲ್ಲ ಎಂಬುದು ಗೊತ್ತಿರಲ್ಲ.

ಈ ಮೂರು ಬಗೆಯಲ್ಲಿ ಪೂರ್‍ಣಾಸ್ತಿಕರು (ನ)ಆಸ್ತಿಕತಾವಾದಗಳಿವೆ ಚರ್ಚೆಗಳಿಗೆ ಬರುವುದೇ ಇಲ್ಲ. ಅವರಿಗೆ ಬೇರೆಯವರಿಗೆ ಉತ್ತರಕೊಟ್ಟು ಏನೂ ಆಗಬೇಕಾಗೂ ಇಲ್ಲ. ಅವರದು ಸಂಪೂರ್ಣ ದೃಢಭಕ್ತಿ. ಆದರೆ ಅನಾಸ್ತಿಕರು, ನಾಸ್ತಿಕರು ಹಾಗಲ್ಲ.

ಅನಾಸ್ತಿಕ ಸ್ಥರದ ಬಗ್ಗೆ ಹೆಚ್ಚು ತಿಳಿಯಬೇಕು.!

ಇಂದ”][strategic-innovation] ಇಂದ

[strategic-innovation


ಮೊದಲಿಗೆ ಹೇಳಿಬಿಡುವೆನು, ನಂಬಿಕೆಯು ಪ್ರಶ್ನಾತೀತ, ಅದನ್ನು ಪ್ರಶ್ನಿಸಿ ತಮ್ಮ ಮನಸ್ಸು ನೋಯಿಸಬೇಡಿ ಎಂಬವರಿಗೆ. ಜಗತ್ತಿನಲ್ಲಿ ಯಾವುದೂ ಪ್ರಶ್ನಾತೀತವಲ್ಲ, ತರ್‍ಕಾತೀತವಲ್ಲ, ಆದರೆ ವಿಷಯದಿಂದ ನೊಂದುಕೊಳ್ಳುವುದು ಅವರವರ ಮನೋದೌರ್ಬಲ್ಯ.

ಕ್ರಿಸ್ತ ಮತ್ತು ಇಸ್ಲಾಂ ರಿಲಿಜನ್ಗಳ ಬಗ್ಗೆ ನನಗಷ್ಟು ಅರಿವಿಲ್ಲ. ಆದರೆ ನಮ್ಮ ಇಂಡಿಯದ ಎಲ್ಲ ಮತಗಳು ಈ ಆತ್ಮ ಎಂಬ ಕಲ್ಪನೆಯ ಸುತ್ತಲೇ ಸುತ್ತುತ್ತವೆ. ಈ ’ಆತ್ಮ’ ಎಂಬ ಕಲ್ಪನೆ, ಸಂಗತಿಯ ಸುತ್ತ ಹೆಣೆದಿರುವ ಮತಗಳ ಬಗ್ಗೆ ಈ ಬರಹದ ಗಮನ.

ಅದ್ವೈತ, ದ್ವೈತ ಮತ್ತು ವಿಶಿಷ್ಟಾದ್ವೈತಗಳು, ಜೀವಾತ್ಮ ಮತ್ತು ಪರಮಾತ್ಮಗಳು, ಒಂದೋ ಇಲ್ಲವೇ ಬೇರೆಬೇರೆಯೂ ಎಂಬ ವಾದದ ಮೇಲೆ ಹೆಣೆದುಕೊಂಡ ನಂಬಿಕೆಗಳು. ಅದ್ವೈತದಲ್ಲಿ ಸೃಷ್ಟಿಕರ್ತ ಮತ್ತು ಅವನ ಸೃಷ್ಟಿ ಎರಡೂ ಒಂದೇ ಸಂಗತಿಯಾದುದರಿಂದ ಸೃಷ್ಟಿಕರ್ತ ಎಂಬುವನಿಲ್ಲ, ಅವನ ಸೃಷ್ಟಿ ಎಂಬುವುದಿಲ್ಲ.ಇರುವುದು ಎಲ್ಲವೂ ಒಂದೇ ಆತ್ಮ. ಅದೇ ದೇವರು. ಇನ್ನು ದ್ವೈತದಲ್ಲಿ ಸೃಷ್ಟಿಕರ್ತ ಮತ್ತು ಅವನ ಸೃಷ್ಟಿ ಬೇರೆ ಬೇರೆ. ಆದುದರಿಂದ ಸೃಷ್ಟಿಕರ್ತನೆಂಬವನ್ನು ಸೃಷ್ಟಿ ಎಂಬುದನ್ನು ಹುಟ್ಟಿಸಿದ್ದಾನೆ.

ಇನ್ನು ಈ ಆತ್ಮದ ಮೇಲೆ ಮರುಜನ್ಮ, ಹಿಂದಿನ ಜನ್ಮ, ಪ್ರಾರಬ್ಧ; ಪಾಪ, ಪುಣ್ಯದ ಡೆಪಾಸಿಟ್ಟು;ಮುಂದಿನ ಜನ್ಮದಲ್ಲಿ ಪಾಪಪುಣ್ಯದ ವಿತ್‌ಡ್ರಾವಲ್ಲು… ಇವೆಲ್ಲ…..

ಅದ್ವೈತದಂತೆ ’ಸರ್ವಂ ಖಲ್ವಿದಂ ಬ್ರಹ್ಮಾ’/’ಎಲ್ಲವೂ ಬ್ರಹ್ಮ’ ಎಂದಾದರೆ, ಅಲ್ಲಿ ನಾನೂ ಬ್ರಹ್ಮ ಮತ್ತು ಮಿಕ್ಕ ಎಲ್ಲವೂ ಬ್ರಹ್ಮ. ಆದುದರಿಂದ ದೇವರು ಎಂಬುದು ವಿಶೇಷವೂ ಅಲ್ಲ. ನಮಗಿಂತ ಬಲಶಾಲಿಯಾಗಲಿ, ಬುದ್ಧಿಶಾಲಿಯಾಗಲಿ, ಮತ್ತೇನೇ ಬೇರೊಂದಾಗಲಿ ಆಗಿರಲು ಸಾಧ್ಯವಿಲ್ಲ. ಏಕೆಂದರೆ ದೇವರೂ ಮತ್ತು ನಾವು ಎಲ್ಲವೂ ಒಂದೇ ಬ್ರಹ್ಮ. ಆದುದರಿಂದ ದೇವರ ಆರಾಧನೆ ಮುಂತಾದವು ನಿರರ್ಥಕ. ಇನ್ನು ಪಾಪಪುಣ್ಯಗಳೂ ಬ್ರಹ್ಮ ತಾನೆ. ಒಂದು  ಬ್ರಹ್ಮವಾದ ಪಾಪ, ಇನ್ನೊಂದು ಬ್ರಹ್ಮವಾದ ಪುಣ್ಯಕ್ಕಿಂತ ಮೇಲಾಗಲಿ ಕೀಳಾಗಲಿ ಆಗಿರದು. ಅದಕ್ಕೆ ಎಲ್ಲ ಕರ್ಮಗಳೂ ಬ್ರಹ್ಮ, ಅದರಿಂದ ಮುಂದೆ ಕಷ್ಟ ತರುವ ಪಾಪವಾಗಲಿ, ಸುಖಕೊಡುವ ಪುಣ್ಯವಾಗಲಿ ಬೇರೆಬೇರೆಯಾಗಿ ಲಭಿಸದು. ಇನ್ನು ಮರುಜನ್ಮ ಎಂಬುದು ಒಂದು ಹೊಸ ಜನ್ಮ ಅಲ್ಲವೇ ಅಲ್ಲ. ಏಕೆಂದರೆ ದೇಹವೂ ಬ್ರಹ್ಮ ಮತ್ತು ಆತ್ಮವೂ ಬ್ರಹ್ಮವಾಗಿರಲು, ಭಗವದ್ಗೀತೆಯಂತೆ ಬ್ರಹ್ಮವಾದ ಆತ್ಮ, ಬ್ರಹ್ಮವಾದ ದೇಹಗಳನ್ನು ತಮ್ಮ ಬ್ರಹ್ಮವಾದ ಕರ್ಮಗಳ ಅನುಸಾರ ಬದಲಾಯಿಸಿ ಬ್ರಹ್ಮವೆಂಬ ಜನ್ಮವನ್ನು ಪಡೆಯುವುದು ಎಂಬು ತರ್ಕಸಮ್ಮತವಲ್ಲ.  ಈ ಗೊಜಲು ಸಿದ್ಧಾಂತದಲ್ಲಿ ನಾನೇ ದೇವರು ಎಂದಾದ ಮೇಲೆ, ಇನ್ನೊಬ್ಬ ದೇವರ ಆರಾಧನೆಯಾಗಲಿ, ಆ ದೇವರ ಪ್ರಾರ್ಥನೆಯಾಗಿ ಅರ್ಥವುಳ್ಳದ್ದೇ?

ಅದ್ವೈತಕ್ಕೆ ಒಂದು ಭಗವದ್ಗೀತೆ ಶ್ಲೋಕವನ್ನು ಗಮನಿಸೋಣ

ಬ್ರಹ್ಮಾರ್ಪಣಂ ಬ್ರಹ್ಮಾ ಹವಿಃ

ಬ್ರಹ್ಮಾಗ್ನೌ ಬ್ರಹ್ಮಣಾಹುತಂ

ಬ್ರಹ್ಮೇಣ ತೇನ ಗಂತವ್ಯಂ

ಬ್ರಹ್ಮಕರ್ಮ ಸಮಾಧಿನಾ

ಇಲ್ಲಿ ಅರ್ಪಣೆ, ಹವಿಸ್ಸು, ಅಗ್ನಿ, ಆಹುತಿ, ಗಂತವ್ಯ, ಸಾಧನ, ಕರ್ಮ ಎಲ್ಲವೂ ಬ್ರಹ್ಮ.  ಇದು ಎಲ್ಲದಕ್ಕೂ ಅನ್ವಯಿಸುವುದು.  ಅದ್ವೈತವೂ ದೇವರು ಎಂಬುದು ಯಾವುದೇ ವಿಶೇಷವಾದುದಲ್ಲ. ಎಲ್ಲವೂ ಒಂದೇ ಅದು ಬ್ರಹ್ಮ. ಹಾಗೆಂದರೆ ಇಡೀ ಬ್ರಹ್ಮದಲ್ಲಿ ಯಾವುದೂ ಒಂದು ಬ್ರಹ್ಮದ ಒಂದು ಅಂಶವೆಂದಲ್ಲ. ಪ್ರತಿಯೊಂದು ಬ್ರಹ್ಮ. ಎಲ್ಲವೂ ಒಟ್ಟಾರೆಯೂ ಬ್ರಹ್ಮ. ಗೋಜಲು?

ಇನ್ನು ದ್ವೈತ. ಇಲ್ಲಿ ಸೃಷ್ಟಿ(ಜೀವಾತ್ಮ) ಮತ್ತು ಸೃಷ್ಟಿಕರ್ತ(ಪರಮಾತ್ಮ) ಬೇರೆಬೇರೆ. ಪರಮಾತ್ಮನಿಗೆ ಬೇರೇನು ಕೆಲಸವಿಲ್ಲದಂತೆ, ಆತ್ಮಗಳ ಪಾಪ, ಪುಣ್ಯಗಳ ಲೆಕ್ಕ ಮಾಡಿ ಮುಂದಿನ ಜನ್ಮದ ತೀರ್ಮಾನ ಮಾಡುವನು, ಇಲ್ಲವೇ ಮೋಕ್ಷದ ಸ್ಟೇಟಸ್ ಕೊಡವನು. ಇಲ್ಲಿ ಮೂರು ಸಂಗತಿಗಳು ಬಂದವು.

೧) ಪರಮಾತ್ಮ

೨) ಜೀವಾತ್ಮ

೩)ದೇಹ-ಇದು ಆತ್ಮವೂ ಅಲ್ಲ ಪರಮಾತ್ಮವೂ ಅಲ್ಲ ತಾನೆ?ಭಗವದ್ಗೀತೆಯಂತೆ?

ಇಲ್ಲಿ ಕೆಲವು ಪ್ರಶ್ನೆಗಳು ಏಳುವುವು

ಅ) ಪರಮಾತ್ಮ, ಮೊದಲನೇ ಜನ್ಮವನ್ನು ಯಾವ ಆಧಾರದ ಮೇಲೆ ಕೊಟ್ಟಿದ್ದು, ನಿರ್‍ಧಿಸಿದ್ದು?

ಆ) ಜಗನ್ನಿಯಾಮಕನಾದ ಪರಮಾತ್ಮನ ಇಚ್ಛೆಯಿಲ್ಲದೇ ಹೇಗೆ ಜೀವಾತ್ಮ ಪಾಪಪುಣ್ಯಗಳನ್ನು ಮಾಡಿಯಾವು?

ಇ) ಇನ್ನು ಆತ್ಮ ದೇಹದ ಯಾವ ಭಾಗದಲ್ಲಿರುತ್ತದೆ?

ಈ ಪ್ರಶ್ನೆಗಳನ್ನು ಯೋಚಿಸಿದರೆ ಇಲ್ಲೂ ಹಲವು ತೊಡಕುಗಳು ಕಾಣುವುವು.

ಇನ್ನು ಪರಮಾತ್ಮ, ದೇವರು ಜಗತ್ತಿನ ಶಕ್ತಿ(Energy) ಎಂದು ಮಾತು ಮಾಡುವವರು, ಆ ಶಕ್ತಿಯನ್ನು ಯಾಕೆ ಪೂಜೆ ಮಾಡಬೇಕು ಎಂದು ಹೇಳರು. ನಾವು ಅಗ್ನಿ, ವರುಣ ಎಂದು ಪೂಜೆ ಮಾಡುತ್ತೇವೆ, ಆದರೆ ದಿನನಿತ್ಯ ಬಳಸುವ ವಿದ್ಯುಚ್ಚಕ್ತಿಯನ್ನು ಯಾಕೆ ಪೂಜೆ ಮಾಡಲ್ಲ? ನ್ಯೂಕ್ಲಿಯರ್‍ ಶಕ್ತಿಯನ್ನು ಯಾಕೆ ಪೂಜೆ ಮಾಡಲ್ಲ. ಈ ಶಕ್ತಿಮೂಲಗಳ ಬಗ್ಗೆ ಯಾಕೆ ಧರ್ಮಗ್ರಂಥದಲ್ಲಿ ಉಲ್ಲೇಖವೇ ಇಲ್ಲ? ಇದ್ದರು ಇವು ಯಾಕೆ ಪೂಜೆಗೆ ಅರ್ಹವಲ್ಲ.

ಹೀಗೆ ಪ್ರಶ್ನಿಸುತ್ತಾ ಹೋದರೆ, ಎಷ್ಟು  ಭ್ರಾಂತಿಗಳು, ತರ್ಕಹೀನ ಪೆದ್ದುತನಗಳು ಅರಿವಾಗುವುವು. ಆದರೆ ದೇವರ ಪ್ರಚಾರಕರು ತರ್ಕಶಕ್ತಿಯನ್ನೇ ಅಳಿಸಿ ಹಾಕಿ, ದೇವರ ನಂಬಿಕೆಯಲ್ಲೇ ನಿಮಗೆ ನೆಮ್ಮದಿ. ಪ್ರಶ್ನಿಸದೇ ನಂಬು ಎಂದು ಹೇಳುವರು. ವಿವೇಚನೆಯಿರುವ ಯಾವ ಮನುಷ್ಯ ತಾನೆ ಹಾಗೆ ಒಪ್ಪಬಲ್ಲ?


ಹಾಗೆ ನೋಡಿದರೆ, ಇದು ಮೊದಲ ನುಡಿಯೇನಲ್ಲ. ಸುಮಾರು ಎರಡು ಸಾವಿರ ವರ್ಷಕ್ಕೂ ಮುಂಚಿಂದಲೇ “ವೇದ ಪ್ರಾಮಾಣ್ಯ”ವನ್ನು ಪ್ರಶ್ನಿಸುತ್ತಾ ಅಂದಿನ ವೈ‌ಜ್ಞಾನಿಕ ಅರಿವಿನ ಪೂರ್ಣಬಳಕೆಯನ್ನು ಮಾಡಿಕೊಂಡು “ಲೋಕಾಯತ”ವನ್ನು ಸಾರುತ್ತಾ ಬಂದವರು ನಮ್ಮ ಪೂರ್ವಿಕರು.

“ಲೋಕಾಯತ” ಎಂಬ ಪದವೇ ಹೇಳುವಂತೆ – ಲೋಕದ ತಳಹದಿಯಾದ ಚಿಂತನೆ. ಇಲ್ಲಿ “ಲೋಕ” ಎಂಬ ಪದ ಜಗತ್ತೂ ಆಗುತ್ತದೆ, ಜನಪದ ಎಂದೂ ಆಗುತ್ತದೆ.

ಇಂದಿನ ಜನತಂತ್ರದ ಯುಗದಲ್ಲಿ ಇದಕ್ಕಿಂತ ಮುಖ್ಯವಾದ ಯೋಚನೆ, ಚಿಂತನೆ ಇರಲು ಸಾಧ್ಯವೆ? ತರ್ಕ ಹಾಗು ವಿಜ್ಞಾನದಿಂದ ಬಲ ಪಡೆವ ಈ ಚಿಂತನಾಕ್ರಮ ಬರೇ ರಾಜಕೀಯ ಮಾತ್ರವಲ್ಲ, ಲೋಕವನ್ನು ಅರಿಯುವ ಎಲ್ಲ ಪ್ರಯತ್ನಕ್ಕೂ ಮುಖ್ಯವೇ.

… ಇರಲಿ, ಇದರ ಬಗ್ಗೆ ಇನ್ನೂ ಹೆಚ್ಚು ಮುಂದೆ ಮಾತಾಡೋಣ.